ವೇ೦ಕಟ ರಮಣನೆ ಬಾರೋ ಶೇಷಾಚಲ ವಾಸನೆ ಬಾರೋ
Singer : Rama Prasad
ವೇ೦ಕಟ ರಮಣನೆ ಬಾರೋ
ಶೇಷಾಚಲ ವಾಸನೆ ಬಾರೋ
ಪಂಕಜನಾಭ ಪರಮ ಪವಿತ್ರಾ
ಶಂಕರ ಮಿತ್ರನೇ ಬಾ ರೋ ....... ।। ವೇ ।।
ಮುದ್ದು ಮುಖದ ಮಗುವೇ
ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯ ವೇಕೋ ನಿನ್ನೊಳಗೆ
ನಾನು ಹೊಂದಿದ್ದೇನೋ ಬಾರೋ ...... ।। ವೇ ।।
ಮಂಧರ ಗಿರಿಯ ನೆತ್ತಿದ
ಆನಂದ ಮೂರುತಿ ಬಾರೋ
ನಂದನ ಕಂದ ಗೋವಿಂದ ಮುಕುಂದ
ಇಂದಿರೆ ಯರಸನೇ ಬಾರೋ ...... ।। ವೇ ।।
ಕಾಮನಯ್ಯ ಕರುಣಾಳೂ
ಶ್ಯಾಮಲ ವರ್ಣನೆ ಬಾರೋ
ಕೋಮಲಾಂಗ ಶ್ರೀ ಪುರುಂಧರ ವಿಠಲನೇ
ಸ್ವಾಮಿರಾಯನೇ ಬಾರೋ ...... ।। ವೇ ।।
collected by : sgk murthy
|
8:45 PM (43 minutes ago)
![]() | ![]() ![]() | ||

No comments:
Post a Comment