ಆವ ರೋಗವು ಯೆನಗೆ ದೇವ ಧನ್ವಂತ್ರಿ
ಆವ ರೋಗವು ಯೆನಗೆ ದೇವ ಧನ್ವಂತ್ರಿ . . . . . . . . . . .. .
ಸಾವ ಧಾನದಿ ಯಿಂದ ಕೈ ಪಿಡಿದು ನೋಡಯ್ಯಾ \\ ಅ \\
ಆವ ರೋಗವು ಯೆನಗೆ ದೇವ ಧನ್ವಂತ್ರಿ . . . . . . . . . . .. .
ಹರಿ ಮುಕ್ತಿ ಗಳು ಯನ್ನ ಕಂಗಳಿಗೆ ಕಾಣಿಸವೂ
ಹರಿಯ ಕೀರ್ತನೆಯೂ ಕೇಳಿಸದು ಕಿವಿಗೇ
ಹರಿ ಮಂತ್ರ ಹರಿ ಸ್ತೋತ್ರ ಬಾರದು ಇನ್ನ ನಾಲಿಗೆಗೆ
ಹರಿ ಪ್ರಸಾದವ ಜೀವ ಸವಿದು ನೋಡಯ್ಯಾ \\ ಅ \\
ಹರಿ ಪಾದ ಸೇವೆಗೆ ಹಸ್ತಗಳು ಚಲಿಸವೋ
ಗುರು ಹಿರಿಯ ರಂಗ್ರಿಗೇ ಶಿರ ಬಾಗದೊ
ಹರಿಯ ನಿರ್ಮಲ್ಯವಾ ಘ್ರಾಣಿ ಸದು ನಾಸಿಕವೂ
ಹರಿ ಆಸ್ಥಿಗಳ ಯೆನ್ನ ಕಾಳೇ ದಯ್ಯಾ \\ ಅ \\
ಆನಾಥ ಬಂದು ಗೋಪಾಲ ವಿಠ್ಠಲ ರಾಯ
ನನ್ನ ಭಾಗ್ಯದ ವೈದ್ಯ ನೀನೆ ನೀನೆ
ಅನಾದಿ ಕಾಲದ ಭವ ರೋಗ ಕಳಿ ವಯ್ಯಾ
ನಾ ನೆಂದಿಗೂ ಮರಿವೆ ನಿನ್ನ ಉಪಕಾರಾ \\ ಅ \\