ಕಾಮ ದೇವನ ಗೆಲಿದ ಕಾಮ ಪಿತನಿಗೆ ವಲಿದ
ಕಾಮಾಕ್ಷಿ ಹೈಮವತಿ ದೆವಿಯ ಸುಪುತ್ರಾ ..................॥ ಕಾ ॥
ಕಾಯಿ ಕಬ್ಬನು ತಿನುವ ಕೆರಿಗಡವು ತನಗೆನುವ
ಕಾಯೋ ಎಂದು ಸುರಿದರೇ ಕಾಲನನೇ ಗೆಲುವ ..................॥ ಕಾ ॥
ಕಳಿತ ಕದಲಿಯ ಮೇಲುವ , ಗರಿಕೆ ಹುಲ್ಲಿಗೆ ಒಲಿವ
ಕೈ ಮುಗಿವೆ ಕಲಿಮಲವ ಕಳೆಯೋ ಗಣಪ ..................॥ ಕಾ ॥
ವಿದ್ಯಯನು ಬುದ್ಧಿಯನು ಶ್ರದ್ಧೆ ಶಾಲೀನಿತೆಯ
ವಿಘ್ನ ರಾಜನೇ ಯಿತ್ತು ಹರಿಸು ನಮ್ಮನು ಅನುದಿನವು ..................॥ ಕಾ ॥
ವಿಘ್ನ ಗಳ ಪರಿಹರಿಸು ಹರ ನೊಲಿಮೆಯನು ಕೊಡಿಸು
ವಿಷ್ಣುಮೂರ್ತಿ, ಬ್ರಹ್ಮ , ದೇವೇಂದ್ರ ಸಹಿತಾ ..................॥ ಕಾ ॥
No comments:
Post a Comment