ಆವ ಕುಲವೋ ರಂಗಾ ......ಆಆ.ಆಆ.ಆಆ
ಆವ ಕುಲವೋ ರಂಗಾ ....... ಅರಿಯ ಲಾಗದೂ ........
ಆವ ಕುಲವೋ ರಂಗಾ ....... ।। ಆ ।।
ಆವಕುಲ ವೆಂದರಿಯ ಲಾಗದು, ಗೋವು ಕಾಯ್ದ ಗೊಲ್ಲ ನಂತೇ
ವೇದ ಲೋಕದ ಪಾರಿಜಾತವು ಹೂವು ಸತಿಗೆ ತಂದ ನಂತೇ
ಆವ ಕುಲವೋ ಓ ಓ ಓ ಓ ।। ಆ ।।
ಗೋಕುಲದಲ್ಲಿ ಹುಟ್ಟಿದ ನಂತೇ ಗೋವು ಗಳನು ಕಾಯ್ದ ನಂತೇ
ಕೊಳಲು ನೋದಿ ಮೃಗ ಪಕ್ಷಿಗಳಾ ಮರಳು ಮಾಡಿದ ನಂತೇ
ತರಳ ತನದಿ ಮರಳ ನಿಗಹಿ ಮರವ ಮುರಿದು ಮತ್ತೆ ಹಾರೀ
ತೆರೆದು ಬಾಯ್ ವಳಗೆ ಈ ರೇಳು ಲೋಕವ, ಇರಿಸಿ ತಾಯಿಗೆ,
ತೋರ್ದ ನಂತೆ ।। ಆ ।।
ಗೊಲ್ಲ ತಿಯರ ಮನಿಗೆ ಹೂಕ್ಕೂ ಕಳ್ಳತನವಾ ಮಾಡಿದ ನಂತೇ
ಬಲ್ಲಿದ ಪೂತನಿಯ, ವಿಷವ ನುಂಡೂ ಮೆಲ್ಲನೇ ತೃಣನ ಕೊಂಡ ನಂತೇ
ಪಕ್ಷಿ ತನ್ನ ವಾಹನ ನಂತೇ ಹಾವು ತನ್ನ ಹಾಸಿಗೆ ಯಂತೇ
ಮುಕ್ಕಣ್ಣ ತನ್ನ ಮೊಮ್ಮಗ ನಂತೇ ಮುದ್ದು ಮುಖವ ಚೆಲ್ವ ನಂತೇ ।। ಆ ।।
ಕರಡಿ ಮಗಳ ತಂದ ನಂತೇ ಶರಧಿ ಮಗಳು ಮಡದಿ ಯಂತೇ
ಧರಣಿ ಯನ್ನೂ ಬೇಡಿದ ನಂತೇ ಈ ರೇಳು ಲೋಕದ ವಡಿಯ ನಂತೇ
ಹಡಗಿ ನಿಂದಲಿ ಬಂದ ನಂತೇ ಕಡಲ ದಡಿಯಲಿ ನಿಂದ ನಂತೇ
ವೋಡನೆ ಮಧ್ವರ ವೊಲಿದ ನಂತೇ ವಡೆಯಾ ಹಯವದನ ನಂತೇ ।। ಆ ।।
ಆವ ಕುಲವೋ ರಂಗಾ ....... ಅರಿಯ ಲಾಗದೂ ........
ಆವ ಕುಲವೋ ರಂಗಾ ....... ।। ಆ ।।
ಆವಕುಲ ವೆಂದರಿಯ ಲಾಗದು, ಗೋವು ಕಾಯ್ದ ಗೊಲ್ಲ ನಂತೇ
ವೇದ ಲೋಕದ ಪಾರಿಜಾತವು ಹೂವು ಸತಿಗೆ ತಂದ ನಂತೇ
ಆವ ಕುಲವೋ ಓ ಓ ಓ ಓ ।। ಆ ।।
ಅರಿಯ ಲಾಗದೂ ....... .ಅರಿಯ ಲಾಗದೂ ........
No comments:
Post a Comment