ಸಕಲ ಗ್ರಹಗಳ ನೀನೆ ಸರಸಿ ಜಾಕ್ಷ
ಸಕಲ ಗ್ರಹಗಳ ನೀನೆ ಸರಸಿ ಜಾಕ್ಷ ಆಆ ಆಆ
ನಿಖಿಲ ರಕ್ಷಕ ನೀನೆ ವಿಶ್ವ ವ್ಯಾಪಕನೇ ।। ಸ ।।
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರು ಶನಿಯು ಮಂಗಳನು ನೀನೇ
ದಿನ ರಾತ್ರಿಯೂ ನೀನೆ, ನವ ವಿಧಾನವು ನೀನೆ
ಭವ ರೋಗ ಹರ ನೀನೆ , ಭೇಷಜನು ನೀನೇ ।। ಸ ।।
ಪಕ್ಷ ಮಾಸವು ನೀನೆ ಪರ್ವ ಕಾಲವು ನೀನೆ
ನಕ್ಷತ್ರ ಯೋಗ ತಿಥಿ ಕರಣ ನೀನೇ
ಅಕ್ಷಯ ವೆಂದು ದ್ರೌಪದಿಯ ಮಾನವ ಕಾಯ್ದ ಆಅ
ಪಕ್ಷಿ ವಾಹನ ದೀನ ರಕ್ಷಕನು ನೀನೇ ।। ಸ ।।
ಋತು ವತ್ಸರವು ನೀನೆ ಪ್ರಕೃತಿ ಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ
ಜೀತ ವಾಗಿ ಎನ್ನೊಡಯ ಪುರುಂಧರ ವಿಠ್ಠಲನೇ
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮಾ ನೀನೇ ।। ಸ ।।
No comments:
Post a Comment