ಏನು ಕಾರಣ ದಿಂದ ಮಲಗಿರುವೆಯೋ
ಏನು ಕಾರಣ ದಿಂದ ಮಲಗಿರು ವೆಯೋ
ಶ್ರೀನಾಥ ರಘು ಕುಲೋದ್ಭವ ದರ್ಭ ಶಯನಾ ।। ಏ ।।
ಸೀತೆ ಪೊದಲು ಯಂದು ಚಿಂತೆಯಲಿ ಮಲಗಿದೆಯೋ
ಸೇತು ಗಟ್ಟುವದು ಅಸಾಧ್ಯ ವೆಂದು ಮಲಗಿದೆಯೋ
ಕೋತಿ ಗಳ ಕೈಲಿ ರಣ ಆಗದೆಂದು ಮಲಗಿದೆಯೋ
ಜ್ಯೋತಿರ್ ಮಯಾ ರೂಪ ಹೇ ದರ್ಭ ಶಯನಾ ।। ಏ ।।
ವನ ವಾಸ, ತಿರುಗ ಲಾರೆ ಯಂದು ನೀ ಮಲಗಿದೆಯೋ
ವನ ಧೀಶ ಮಾರ್ಗವನು ಕೊಡು ಯಂದು ಮಲಗಿದೆಯೋ
ದನುಜ ಬಲ್ಲಿದ ನೆಂಬೋ ವ್ಯಾಕುಲದಿ ಮಲಗಿದೆಯೋ
ಹನುಮ ವಂದಿತ ಪಾದ ಶ್ರೀ ದರ್ಭ ಶಯನಾ ।। ಏ ।।
ಅನಲಾಕ್ಷ ಹರನಿಗೆ ಕರುಣಿಸಿ ಮಲಗಿದೆಯೋ
ವನಜ ಸಂಭವನಿಗೆ ಒಲಿದು ನೀ ಮಲಗಿದೆಯೋ
ಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೋ
ಏನ ಗೊಲಿದ ವಿಜಯ ವಿಠ್ಠಲ ದರ್ಭ ಶಯನಾ ।। ಏ ।।
No comments:
Post a Comment