ಬಾರಯ್ಯಾ ಮನೆಗೆ ರಂಗಯ್ಯಾ ನೀನು
ಬಾರಯ್ಯಾ ಮನೆಗೆ ರಂಗಯ್ಯ ನೀನೂ
ಜಾರ ಚೋರಾ ಕೃಷ್ಣಾ ......... ಜಾನಕಿ ಪತಿ ರಾಮಾ ।। ।ಬಾ ।।
ನಂದಾ ನಂದನಾ ನವನೀತ ಚೋರಾ ಕೃಷ್ಣಾ
ಮಂಧರೋ ದ್ದಾರಾ ಮಾಧವ ರಾಯ ರಾಮಾ ।। ।ಬಾ ।।
ಗೋಕುಲ ದಲ್ಲಿ ಗೋಪಿಯರಾ ಕೋಡಿ
ಲೋಕ ನೋಡಲು ಅವರ ಸಾಕು ಮಾಡಿ
ಪಳ್ಳಿ ಪಳ್ಳಿ ಗಳಲ್ಲಿ ಯಲ್ಲಾ ಮೊಸರು ಹಾಲು ಬೆಣ್ಣೆ
ಕೊಳ್ಳಿ ಯಾಡಿ ಗೋಪಿ ಮುಡಿಯನ್ನೇ ಪಿಡಿದ ।। ।ಬಾ ।।
ಅನಂತ ಪದ್ಮನಾಭಾ ಅಪ್ರಮೇಯಾ ಹೃಷಿಕೇಶಾ
ದಾನವಾಂತಕ ರಂಗ ದಶರಥ ಪುತ್ರ ರಾಮಾ
ಪರಮ ಪವಿತ್ರ ರಾಮಾ ಭದ್ರಾ ಚಲಾ ಧೀಶ
ವರದ ಶ್ರೀ ಪುರಂದರ ವಿಠಲನೇ ರಾಮಾ ।। ।ಬಾ ।।
No comments:
Post a Comment