ಸುಂದರ ಮೃಗಧರ ಪಿನಾಕ (ಚಂದ್ರಚೂಡ ಶಿವ)
ವಾಮದೇವ ವಿರಿಂಚಿ ತನಯ ಮಾ ಮನೋಹರ ಉಗ್ರ ಧೂರ್ಚೆಟೀ
ಸಾಮ ಜಾಜಿ ನವಸನ ಭೂಷಣ, ಸುಮನೋತ್ತಂಸ .. . . . . . . . . . .
ಕಾಮ ಹರ ಕೈಲಾಸ ಮಂದಿರ, ಸೋಮ ಸೂರ್ಯಾನಲ, ವಿಲೋಚನ
ಕಾಮಿತ ಪ್ರದ , ಕರುಣಿ ಸೇಮಗೆ ಸದಾ ಸುಮಂಗಲವ . . . . ಆಆ ಆಆ ಆಆ
ಶಂಕರಾ ಆ ಆ ಆ ಆ ಆ . . . . . . . . ಪಾರ್ವತೀ ರಮಣಾ . . . . . . . .
ಶಂಕರಾ ಆ ಆ ಆ ಆ ಆ ಆ ಆ ಆ, ಶಂಕರಾ ಆ ಆ ಆ ಆ ಆ ಆ ಆ ಆ ಅ.ಪ.
ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ, ಗಜ ಚರ್ಮಾoಬರಧರ
ಚಂದ್ರ ಚೂಡಾ ಶಿವ ಶಂಕರ ಪಾರ್ವತಿ ರಮಣಾ ನಿನಗೆ ನಮೋ
ಪಾರ್ವತಿ ರಮಣಾ ನಿನಗೆ ನಮೋ ಪಾರ್ವತಿ ರಮಣಾ ನಿನಗೆ ನಮೋ
ನಂದಿ ವಾಹನಾ, ನಂದದಿಂದ ಮೂರ್ಜಗದಿ ಮೆರೆವನು ನೀನೇ
ಅಂದು ಅಮೃತ ಘಟ ದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧ ದಿಂದ ಕಣ್ತೆರೆದು ಕೊಂದ ಉಗ್ರನೂ ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ
ಚಂದ್ರ ಚೂಡಾ ಶಿವ ಶಂಕರ ಪಾರ್ವತಿ ರಮಣಾ ನಿನಗೆ ನಮೋ
ಪಾರ್ವತಿ ರಮಣಾ ನಿನಗೆ ನಮೋ ಪಾರ್ವತಿ ರಮಣಾ ನಿನಗೆ ನಮೋ ।। ೧ ।।
ಬಾಲ ಮಾರ್ಕಾoಡನು ಕಾಲನು ಎಳೆವಾಗ ಪಾಲಿಸಿ ದವನು ನೀನೇ
ವಾಲ ಯಾದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೇ
ಕಾಲಕೂಟವ ಪಾನ ಮಾಡಿದಾ ನೀಲ ಕಂಠನು ನೀನೇ
ಜಾಲ ಮಾಡಿದ ಗೋಪಾಲ ನೆಂಬ ಹೆಣ್ಣಿಗೆ ಮರುಳಾದವ ನೀನೇ
ಹೆಣ್ಣಿಗೆ ಮರುಳಾದವ ನೀನೇ
ಚಂದ್ರ ಚೂಡಾ ಶಿವ ಶಂಕರ ಪಾರ್ವತಿ ರಮಣಾ ನಿನಗೆ ನಮೋ
ಪಾರ್ವತಿ ರಮಣಾ ನಿನಗೆ ನಮೋ ಪಾರ್ವತಿ ರಮಣಾ ನಿನಗೆ ನಮೋ ।। ೨ ।।
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರ ವಾಸಾನು ನೀನೇ
ಕರದಲಿ ವೀಣೆಯ ನುಡಿಸುವ ನಮ್ಮ ಉರಗ ಭೂಷಣನು ನೀನೇ
ಕೊರಳಲು ಭಸ್ಮಾ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೇ
ಗರುಡ ಗಮನ ಶ್ರೀ ಪರುಂಧರ ವಿಠ್ಠಲಗೆ ಪ್ರಾಣ ಪ್ರಿಯನೂ ನೀನೇ
ಪ್ರಾಣ ಪ್ರಿಯನೂ ನೀನೇ
ಚಂದ್ರ ಚೂಡಾ ಶಿವ ಶಂಕರ ಪಾರ್ವತಿ ರಮಣಾ ನಿನಗೆ ನಮೋ
ಪಾರ್ವತಿ ರಮಣಾ ನಿನಗೆ ನಮೋ ಪಾರ್ವತಿ ರಮಣಾ ನಿನಗೆ ನಮೋ ।। ೩ ।।
ಶಂಕರಾ ಆ ಆ ಆ ಆ ಆ ಆ ಆ ಆ, ಶಂಕರಾ ಆ ಆ ಆ ಆ ಆ ಆ ಆ ಆ