ನಾರಾಯಣ ಎನ್ನಿರೋ ಶ್ರೀನರಹರಿ .
ನಾರಾಯಣಾ ಎನ್ನಿರೋ ಶ್ರೀನರಹರಿ ಪಾರಾಯಣ ಮಾಡಿರೋ
ನಾರಾಯಣಾ ಎಂದು ಅಜಮಿಳನು ಕೈವಲ್ಯ
ಸೆರಿದೆ ನೆಂಬೋ ಸುದ್ದಿಯ ಕೇಳಿ ಅರಯಿರೋ \\ ನಾ \\
ಕಾಸಿಗೆ ಹೋಗ ಬೇಕೆ , ಕಾವಡಿ ಹೊತ್ತು, ಬೆಸೊತ್ತು ತಿರುಗ ಲೇಕೆ
ವಾಸು ದೇವನ ನಾಮ ಬಾಯಿ ತುಂಬಾ ನೆನಿದರೆ
ಕ್ಲೇಶ ಗಳೆಂಬುದು ಲೇಶ ಮಾತ್ರಾ ವಿಲ್ಲಾ \\ ನಾ \\
ಚೋರರ ಭಯ ವಿಲ್ಲವೋ ಹರಿ ನಾಮಕ್ಕೆ
ಯಾರಾ ಅಂಜಿಕೆ ಇಲ್ಲವೋ
ವೂರಾ ನಾಳುವ ದೊರೆಗೆ ನೀತಿ ಭೇದ ಗಳಿಲ್ಲ
ಘೋರಾ ಪಾತಕ ವೆಲ್ಲಾ ದೂರಾ ಮಾಡುವ ದಕ್ಕೆ \\ ನಾ \\
ಸ್ನಾನವ, ಮಾಡ ಲೇಕೇ ಮಾನವರಿಗೆ
ಮೌನ ಮಂತ್ರ ಗಲೇತಕೇ
ದೀನಾ ಪಾಲಕ ನಮ್ಮ ಬೆಟ್ಟದಾ ಒಡೆಯನ್ನಾ
ಧ್ಯಾನಕ್ಕೆ ಸರಿ ಉಂಟೆ ಪುರುಂಧರ ವಿಠಲ \\ ನಾ \\
ನಾರಾಯಣ ಎನ್ನಿರೋ ಶ್ರೀನರಹರಿ ಪಾರಾಯಣ ಮಾಡಿರೋ
ನಾರಾಯಣಾ ಶ್ರೀಮನ್ ನಾರಾಯಣಾ
ಸತ್ಯನಾರಾಯಣಾ ಲಕ್ಷ್ಮಿನಾರಾಯಣಾ ಎನ್ನಿರೂ
ಶ್ರೀ ನರಹರಿ ಪಾರಾಯಣಾ ಮಾಡಿರೋ \\ ನಾ \\