ರಾಮ ರಾಮ ರಾಮ ರಾಮ ರಾಮ ಎನ್ನಿರೂ
ರಾಮ್ನ ರಾಮ ರಾಮ ರಾಮ ರಾಮ ಎನ್ನಿರೋ ಸೀತಾ
ರಾಮ ರಾಮ ರಾಮ ರಾಮ ರಾಮ ಎನ್ನಿರೋ \\ ರಾ \\
ನೇಮ ದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ
ಸೀತಾ ರಾಮ ರಾಮ ರಾಮ ರಾಮ ರಾಮ ಎನ್ನಿರೋ \\ ರಾ \\
ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು
ಕೊರಳಿ ಗಾತ್ಮ ಸೇರಿ ದಾಗ ಹರಿಯ ಧ್ಯಾನ ಬಾರದಯ್ಯಾ \\ ರಾ \\
ಇಂದ್ರಿ ಯಂಗಳೆಲ್ಲ ಕೂಡಿ ಬಂದು ತನುವ ಮುಸುಗಿದಾಗ
ಸಿಂಧು ಸುತೆಯ ಪತಿಯ ನಾಮ ಆಂದಿ ಗೋದಗ ಲರಿಯ ದಯ್ಯಾ \\ ರಾ \\
ಶ್ವಾಶ ಕೋಶ ಎರದು ಕಂಠ ವಾಸ ವಾಗಿ ಸಿಲಿಕಿ ದಾಗ
ವಾಸುದೇವ ಕೃಷ್ಣ ನ ನಾಮ ಆ ಸಮಯ ಕೋದಗ ದಯ್ಯಾ \\ ರಾ \\
ಶೃಂಗಾರ ದೇಹವೆಲ್ಲ ಅಂಗ ಬಡಿದು ಮುರಿದು ಬಿದ್ದು
ಕಂಗಾಳಿ ಗಾತ್ಮ ಸೇರಿದಾಗ ಶ್ರೀ ರಂಗ ನಾಮ ಒದಗ ದಯ್ಯಾ \\ ರಾ \\
ವಾತ ಪಿತ್ತ ಯರಡು ಕೂಡಿ ಶ್ಲೇಷ ಬಂದು ಒದಿಗಿದಾಗ
ಧಾತು ಗುಂಡಿ ದಾಗ ರಘುನಾಥ ಧ್ಯಾನ ಒದಗದೋ \\ ರಾ \\
ಕಲ್ಲಿ ನಲ್ಲಿ ಇರುವ ಜೀವ ನಿಲ್ಲ ದಂತೆ ಮರಣ ವೇಳೆ
ಪುಲ್ಲ ನಾಭ ಕೃಷ್ಣ ನೆಂಬೋ ಸೊಲ್ಲು ಬಾಯಿ ಒದಗ ದಯ್ಯಾ \\ ರಾ \\
ಇಹ ದಲ್ಲಿ ಇಷ್ಟ ವುಂಟು ಪರ ದಲ್ಲಿ ಸುಖ ವುಂಟು
ವರ ಪುರಂಧರ ವಿಠಲನ ಸ್ಮರಣೆ ಬಾಯಿಗೆ ಒದಗದಯ್ಯಾ \\ ರಾ \\
ರಾಮ ರಾಮ ರಾಮ ರಾಮ ರಾಮ ಎನ್ನಿರೋ ಸೀತ
ರಾಮ ರಾಮ ರಾಮರಾಮ ರಾಮ ಎನ್ನಿರೋ \\ ರಾ \\
No comments:
Post a Comment