ಏನು ಕಾರಣ ದಿಂದ ಮಲ ಗಿರುವೆಯೋ . . . . . ರಂಗ
ಶ್ರೀನಾಥ ರಘು ಕುಲೋದ್ಭವ ದರ್ಭ ಶಯನಾ . . . . . . . .. . . . . . . .\\ ಏ \\
ಸೀತೆ ಹೋದಳು ಯೆಂದು ಚಿಂತೆಯಲಿ ಮಲಗಿದೆಯೋ
ಸೇತು ಗಟ್ಟುವದು ಅಸಾಧ್ಯ ವೆಂದು ಮಲಗಿದೆಯೋ
ಕೋತಿಗಳ ಕೈಲಿ ರಣ ಆಗದೆಂದು ಮಲಗಿದೆಯೋ
ಜ್ಯೋತಿರ್ಮಯ ರೂಪ ಹೇ ದರ್ಭ ಶಯನಾ . . . . . . . . . . . . . . . . . \\ ಏ \\
ವನ ವಾಸ ತಿರುಗ ಲಾರೆ ಯಂದು ನೀ ಮಲಗಿದೆಯೋ
ವನ ಧೀಶ ಮಾರ್ಗವನು ಕೊಡು ನೆಂದು ಮಲಗಿದೆಯೋ
ದನುಜ ಬಲ್ಲಿದ ನೆಂಬೊ ವ್ಯಾಕುಲದಿ ಮಲಗಿದೆಯೋ
ಹನುಮ ವಂದಿತ ಪಾದ ಶ್ರೀ ಧರ್ಭ ಶಯನಾ . . . . . . . . . . . . . . . . . .. . \\ ಏ \\
ಅನಲಾಕ್ಷ ಹರನಿಗೆ ಕರುಣಿಸಿ ಮಲಗಿದೆಯೋ
ವನಜ ಸಂಭವನಿಗೆ ಒಲಿದು ನೀ ಮಲಗಿದೆಯೋ
ಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೋ
ಎನಗೊಲಿದ ವಿಜಯ ವಿಠಲ ದರ್ಭ ಶಯನಾ . . . . . . . . . . . . . . . . . \\ ಏ \\
ಗೋವಿಂದಾ ಹರಿ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋವಿಂದಾ ಹರಿ ಗೋವಿಂದಾ
No comments:
Post a Comment