ಏಕೆ ಮಮತೆಯ ಕೊಟ್ಟು ದನಿಸುವೆ.
ಏಕೆ ಮಮತೆಯ ಕೊಟ್ಟು ದನಿಸುವೆಯೋ ರಂಗಾ
ನೀ ಕರುಣದಿ ಎನ್ನ ಪಾಲಿಸೋ ಕೃಷ್ಣಾ ........ \\ ಏ \\
ನಿನ್ನನು ಭಜಿಸಲೂ ಅನ್ಯ ವಿಷಯಂಗಳಿ ಗೆನ್ನ
ಒಪ್ಪಿಸುವದು ನೀತಿಯೇ .....
ಮನ್ನಿಸಿ ದಯದಿ ನೀ ಎನ್ನ ಪಾಲಿಸದಿರೆ
ನಿನ್ನ ನೇಮಕೆ ಪ್ರತಿಕೂಲವೇ ರಂಗಾ ........ \\ ಏ \\
ತನುವು ತನ್ನದು ಅಲ್ಲ, ತನು ಸಂಭಂಧಿಗ ಳಾರೋ
ತನು ವಾರೋ. ...... ತಾನ್ಯಾರೋ ...... ಅವರಿಗೇ
ಧನ ಮೊದಲಾದ ವಿಷಯಂಗಳ ಅನುಭವಾ
ಹಿಂದಣ ಜನುಮ, ದಂತಲ್ಲದೇ ರಂಗಾ ........ \\ ಏ \\
ಇಂದ್ರಿಯಂಗಳ ವಿಷಯ ದಿಂದಾ ಭೇದಿಸಿ
ಗೋವಿಂದ ನಿನ್ನ ಮನಕೇ ಬಾರದೇ .......
ಇಂದಿರೆ ಅರಸ, ಬ್ರಹ್ಮಾದಿ ವಂದಿತ ನಿನ್ನ -
ಬಂದ ಶಕುತಿಗೆ ನಮೋ ನಮೋ ... ರಂಗಾ ........ \\ ಏ \\
ಅರಿತು ಅರಿತು ಎನಗೇ ಅರೆಲ ವಾದರೂ
ವಿರಕುತಿ ವಿಷಯದಿ ಬಾರದೂ .........
ಕರುಣಾ ಸಾಗರ ನಿನ್ನ ಸ್ಮರಣ ಒಂದಿಲ್ಲದೇ
ಮರಳು ನೀಗುವ ಭಗೆ ಗಾಣೆನೋ ...... .ರಂಗಾ ....... \\ ಏ \\
ಎಂದಿಗೆ ಇನ್ನೂ ನಿನ್ನ ಚಿತ್ತಕೆ ಬರುವುದೋ . . . .
ಅಂದಿಗೆ ಉದ್ಧರಿಸೋ ಕರುಣಿಯೇ
ಸುಂದರ ವಿಗ್ರಹ ಗೋಪಾಲ ವಿಠಲಾ ಸುಖ -
ಸಾಂದ್ರ ಭವ ವಿಮೋಚಕ ನಮೋ ನಮೋ .... ರಂಗಾ .... \\ ಏ \\
No comments:
Post a Comment