ಶೇಷಾದ್ರಿ ಗಿರಿ ಯಲ್ಲಿ ವಾಸಾ .....
ಶೇಷಾದ್ರಿ ಗಿರಿಯಲ್ಲಿ ವಾಸಾ
ಹೃದಯ ದಲಿ ಲಕ್ಷ್ಮೀ ನಿವಾಸಾ ।। ಶೇ ।।
ಗೋಪಾಲ ಕೃಷ್ಣನ ಅವತಾರ ಕಂದಾ
ಗೋವರ್ಧನಾ ಧಾರಿ ಪಾಹಿ ಮುಕುಂದಾ
ಗೋಕುಲದ ಯಾ ಲೀಲೆ ನಿತ್ಯಾನಂದಾ
ಗೋವಿಂದ ಗೋವಿಂದ ನಿನ ಲೀಲೆ ಚಂದಾ ।। ಶೇ ।।
ವಜ್ರ ವೈಢೂರ್ಯ ಮುತ್ತಿನಾ ಹಾರ
ಪಟ್ಟು ಪೀತಾಂಬರದ ಚೆಲುವಿನಾ ಕಾರ
ದಿವ್ಯ ದರುಶನದಿಂದ ಪಾಪ ಪರಿ ಹಾರ
ಗೋವಿಂದ ಗೋವಿಂದ ನಿನ ಲೀಲೆ ಚಂದಾ ।। ಶೇ ।।
ಕೋಟಿ ಭಕ್ತರು ದಿನವು ಸೇವಿಸುವ ಚರಣಾ
ಧವನ ಮಲ್ಲಿಗೆ ತುಳಸಿ ಮಾಲೆಯ ಅರ್ಪಣಾ
ಮಂತ್ರ ಘೋಷವು ಸ್ವಾಮೀ ನಿನಗೆ ಅರ್ಪಣಾ
ಗೋವಿಂದ ಗೋವಿಂದ ನಿನ ಲೀಲೆ ಚಂದಾ ।। ಶೇ ।।
ಲಕ್ಷ್ಮೀ ಪದ್ಮಾವತೀ ಸೇವಿಸುವ ಪಾದ
ದಾಸಾನು ದಾಸರೊ ಭಕ್ತಿ ತೋರಿದ ಪಾದ
ಮುಕ್ತಿ ಬೇಡುವ ಜನರು ಬಿಡರಯ್ಯ ನಿನ ಪಾದ
ಗೋವಿಂದ ಗೋವಿಂದ ನಿನ ಲೀಲೆ ಚಂದಾ ।। ಶೇ ।।
No comments:
Post a Comment