ಗುಣ ವಾಯಿ ತೆನ್ನ ಭವ ರೋಗ
ಗುಣ ವಾಯಿ ತೆನ್ನ ಭವ ರೋಗ
ಕೃಷ್ಣ ನೆಂಬ ವೈದ್ಯನು ದೊರಕಿದನು ।। ಗು ।।
ಗುಣ ವಾಗುವ ವರಿಗೆ ಎಡೆ ಇಲ್ಲಾ
ಗುಣವಂತ ವಾಗುವದು ಭವವೆಲ್ಲಾ ।। ಗು ।।
ಗುಣ ವಾಯಿ ತೆನ್ನ ಭವ ರೋಗ.......
ಸತತ ಹರಿ ಭಕ್ತಿ ಯನು ಪಾನ .......
ಸತತ ಗುರು ಭಕ್ತಿ ಮರು ಪಾನ ......
ಸತತ ಶ್ರವಣ ಕಠಿನ ಪಥ್ಯ ......
ಸತತ ಕೀರ್ತನ ಉಷ್ನೋದಕ ।। ಗು ।।
ಚಂದ್ರೋ ದಯವೂ ಈತ ನಲ್ಲಿ
ಚಿಂತಾಮಣಿ ಉಂಟೂ ಈತ ನಲ್ಲಿ
ಸಂಚಿಯ ವೊಳಗೆ ತುಂಬಾ ಮಾತ್ರಿಗ ಲುಂಟೂ
ಚೆನ್ನಾಗಿ ಗುಣ ಮಾಡುವ ನೀತ ।। ಗು ।।
ಗುರು ಸ್ಮರಣೆಯ ಶುಂಠಿ ಮೆಣಸು
ದಿವ್ಯ ನಾಮವು ಸಾರನ್ನಾ ಆ ಆ ಆ
ಗುರು ಪಾದವ ಸೇವೆಯೂ ಸಿಹಿ ಸಾರೂ
ಹರಿ ಪಾದೋದಕವೇ ಘೃತವೋ ।। ಗು ।।
ಸಹಸ್ರ ನಾಮದಿ ತಾ ವಂದ್ಯಾ
ಸಕಲ ಸ್ವಾತಂತ್ರಕೆ ತಾ ಭಾಗ್ಯ
ಹರಿ ಸರ್ವೋತ್ತಮ ನೆಂಬ ವೈದ್ಯ
ಪುರಂಧರ ವಿಠಲನೇ ನಿರವದ್ಯಾ ।। ಗು ।।
No comments:
Post a Comment