ಕಂಡೆನಾ ಕನಸಿನಲಿ ಗೋವಿಂದನಾ
ಕಂಡೆನ ಕನಸಿನಲಿ ಗೋವಿಂದನಾ
ಕಂಡೆನ ಕನಸಿನಲಿ ಗೋವಿಂದನಾ
ಕಂಡೆನ ಕನಸಿನಲಿ ಕನಕ ರತ್ನದ ಖಣಿಯಾ
ನಂದನ ಕಂದಾ ಮುಕುಂದನಾ ಚರಣವಾ
ಕಂಡೆನ ಕನಸಿನಲಿ ಗೋವಿಂದನಾ ।। ಕ ।।
ಅಂದಿಗೆ ಕಿರು ಗೆಜ್ಜೆ ಘಳಿರೆಂಬ ವಾದ್ಯದಿ
ಬಂದೂ ಕಾಳಿಂಗನಾ ಹೆಡೆಯ ನೇರಿ
ಧಿಮಿ ಧಿಮಿ ಧಿಮಿ ತೆಂದೋ ತಾಳ ಗತಿ ಗಳಿಂದಾ
ನಂದದಿ ಕುಣಿವಾ ಮುಕುಂದ ನಾ ಚರಣವಾ ।। ಕ ।।
ಉಟ್ಟ ಪೀತಾಂಬರ ಉಡಿಯ ಕಾಂಚಾಣ ಧಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭಊ
ಕಟ್ಟಿದ ವೈಜಯಂತಿ ತುಳಸಿ ವನ ಮಾಲೆ
ಇಟ್ಟ ದ್ವಾದಶ ನಾಮ ನಿಗಮ ಗೋಚರನಾ ।। ಕ ।।
ಮಂಗಳ ವರ ತುಂಗ ಭದ್ರದಿ ಮೆರೆ ವನಾ
ಅಂಗಜ ಪಿತ , ಶ್ರೀ ಪತಿಯಾ ಆ ಆ ಆ ಆ ಆ ಆ
ಶೃಂಗಾರ ಮೂರುತಿ ಶ್ರೀ ಪುರುಂಧರ ವಿಠಲನಾ
ಆ ಆ ಆ ಆ ಆ ಆ ಆ ಆ
ವಿಠಲನಾ ಆ ಆ ವಿಠಲನಾ ಆ ಆ ವಿಠಲನಾ ಆ ಆ
ಶೃಂಗಾರ ಮೂರುತಿ ಶ್ರೀ ಪುರುಂಧರ ವಿಠಲನಾ
ಕಂಗ ಳಿಂದಲಿ ಕಂಡೆ ಹಿಂಗಿತು ಭವ ಭಯಾ ।। ಕ ।।
No comments:
Post a Comment