ಕಾಡು ಮರದ ಕೊಂಬೆ ಗಳಲ್ಲಿ
ಕಾಡು ಮರದ ಕೊಂಬೆ ಗಳಲ್ಲಿ ಕೊರುವಂತ ಗೊಲ್ಲಾ
ಬೇರೆ ಯವರ ಬೆಣ್ಣಿ ಯನ್ನು ಕದ್ದು ತಿನ್ನೊ ಕಳ್ಳ
ಹಾದಿ ಹಾದಿ ಮಕ್ಕಳನ್ನು ಕೂಡಿ ಹಾಕೋ ಗೊಲ್ಲಾ
ಪಟ್ಟು ವಸ್ತ್ರ ಉಟ್ಟಿ ಬಂದ ಪುಟ್ಟ ಹೆಜ್ಜೆ ಕಳ್ಳ
ಕೃಷ್ಣನು ನೀನೆ ನನ್ನ ಕೃಷ್ಣನು ನೀನೆ ।। ಕಾಡು ।।
ಮಣ್ಣು ತಿಂದ ನಿನ್ನ ತಾಯಿ ಬೈ ತಿರುವಾಗಾ
ನಿನ್ನ ಬಾಯಿ ತೋರಿಸಿ ಅಮ್ಮನಿಗೆ ಅಚ್ಛ್ರರ ತಂದೆ
ಹಿಂದೊಂದುದಿನ ಒರಳಿಗೆ ಕಟ್ಟಿರು ವಾಗ
ಕೃಷ್ಣಾ ...... ಕೃಷ್ಣಾ ....... ಕೃಷ್ಣಾ.........
ಹಿಂದೊಂದುದಿನ ಒರಳಿಗೆ ಕಟ್ಟಿರು ವಾಗ
ಅಂದು ನೀನು ಒರಳನೆ ಮಾಯಾ ಮಾಡಿದೆ ಯೆಲ್ಲಾ
ಕೃಷ್ಣನು ನೀನೆ ನನ್ನ ಕೃಷ್ಣನು ನೀನೆ ।। ಕಾಡು ।।
ಅಳತೆ ಮೀರಿ ಕೋಪ ದಿಂದ ನೀ ನಿರುವಾಗಾ
ದುಷ್ಟ ಕಾಳಿಂಗನ ತಲೆಯ ನೇರಿ ನೃತ್ಯ ಮಾಡಿರುವೆ
ಒಂದು ಕೈಲಿ ಪರ್ವತವನು ನೀ ನೆತ್ತಿರುವೆ
ನಮ್ಮ ಹೃದಯ ವೆಂಬ ಗೂಡಿನಲ್ಲಿ ನೀ ನೆಲಿಸಿರುವೆ
ಕೃಷ್ಣನು ನೀನೆ ನನ್ನ ಕೃಷ್ಣನು ನೀನೆ ।। ಕಾಡು ।।
No comments:
Post a Comment