ಏನೆಂದು ಸ್ತುತಿಸಲಿ ತಾಯೀ ಮೀನಾಕ್ಷೀ
ಏನೆಂದರೂ ಪೊರೆವೆ ಪರ ಶಿವನ ಸಾಕ್ಷೀ ।। ಎ ।।
ತ್ರಿಪುರ ಸುಂದರಿ ಎನುವೆ ತ್ರಿಜಗ ಜ್ಜನನಿಯು ವೆನುವೆ
ತಿರುದುಂಡವನ ರಾಣಿ ಎನ್ನ ಲಾದೀತೇ ।। ಎ ।।
ಮಹಿಷ ನಸು ವನು ಸೆಳೆದ ಮಹಿಷ ಮರ್ದಿನೀ
ಮಾನಿನಿಯೋ ಮಾರಿಕಾಂಬೆಯೋ ನೀ ಪೇಳೆ ಎನ್ನುವೆ ।। ಎ ।।
ಕಾತ್ಯಾಯಿನೀ ದೇವಿ ಕಲ್ಯಾಣಿ ಗುಣ ಯುತಳೆ
ಕಾಳಿ ಭೈರವಿ ಎನಲು ಮುನಿಸು ಮಾಡುವೆಯಾ ।। ಎ ।।
ಹೈಮವತಿ ಪಾರ್ವತಿ ಪರ ಶಿವನ ಪ್ರಿಯ ರಾಣಿ
ಹಿಮ ಬೆಟ್ಟ ತವುರು ನಿನ ದೆನ್ನ ಲಾದೀತೇ ।। ಎ ।।
ಗಜ ಗೌರಿ ಜಗ ದಂಬೆ ಮೂರು ಲೋಕವ ಪೊರೆವೆ
ಗಜನ ವೈರಿಯ ಬೆನ್ನು ಆಸನವ ಸರಿಯೆ ।। ಎ ।।
ವಿಶ್ವ ನಾಥನ ದೇಹ ದರ್ದವನು ಆವರಿಪ
ವಿಷ್ಣು ಮೂರ್ತಿಯ ಭಗಿನಿ ವಿಷಕಂಠ ನರಸೀ ।। ಎ ।।
ಏನೆಂದು ಸ್ತುತಿಸಲಿ ತಾಯೀ ಮೀನಾಕ್ಷೀ
ಏನೆಂದರೂ ಪೊರೆವೆ ಪರ ಶಿವನ ಸಾಕ್ಷೀ ।। ಎ ।।
3. ವೈಕುಂಠ ವಾಸಿನಿ ನಾರಾಯಣೀ
ವೈಕುಂಠ ವಾಸಿನಿ ನಾರಾಯಣೀ
ವೆಂಕಟೇಶನ ರಮಣಿ ಭವ ತಾರಿಣೀ ।। ವೈ ।।
ಭವ ಭೋಗ್ಯ ಭಾಗ್ಯಗಳ ಬಹು ವಿಧ ಸಿದ್ಧಿಗಳ
ಭಗವಂತ ನಾಶ್ರಯನು ಯಿತ್ತು ಸಲಹೋ ।। ವೈ ।।
ಭೀತಿ ಗಳ ಬಿಡಿಸಮ್ಮಾ ಶ್ರೀಪತಿಯ ನೊಲಿಸಮ್ಮಾ
ಭಾಗ್ಯವತಿ ಕರುಣಿಪುದು ಹರಿ ಯೋಲಮಿ ಯನೂ
ಭ್ರಮರ ಕುಂತಲ ದೇವಿ ಅನ್ನ ಪೂರ್ಣೇಶ್ವರಿ ಯೇ
ಭೇಧ ವೆನಿಸದೆ ಪೊರೆವೆ ಅನು ದಿನದಲೀ ।। ವೈ ।।
ವೈಷ್ಣವಿಗೆ , ವಿಷ್ಣು ವಲ್ಲಭ ಬೆಗೆ , ಲಕ್ಷ್ಗೆಗೆ, ರಮೆಗೆ
ವಿಷ್ಣು ಮಾಯಗೆ , ವೇದ ವಂದಿ ತೆಗೇ ಮಂಗಳವು
ವಿಷ್ಣು ಮೂರುತಿ ಯರಸೀ ಸರ್ವ ಗುಣ ಸಂಪನ್ನೇ
ವಿಷ್ಣುವುನು ಪೊರೆ ವಳಿಗೆ ಶುಭ ಮಂಗಳಂ ।। ವೈ ।।
ವೈಕುಂಠ ವಾಸಿನಿ ನಾರಾಯಣೀ
ವೆಂಕಟೇಶನ ರಮಣಿ ಭಾವ ತಾರಿಣೀ ।। ವೈ ।।
ವೈಕುಂಠ ವಾಸಿನಿ ನಾರಾಯಣೀ
ವೈಕುಂಠ ವಾಸಿನಿ ನಾರಾಯಣೀ
4. ಅಂಬ ಪರಮೇಶ್ವರಿ ಅಖಿಲಾಂಡೇಶ್ವರಿ
ಅಂಬ ಪರಮೇಶ್ವರಿ ಅಖಿಲಾಂಡೇಶ್ವರಿ
ಆದಿ ಪರಾಶಕ್ತಿ ಪಾಲಯಮಾಂ ।। ಅ ।।
ಹೇ ಭುವನೇಶ್ವರಿ ರಾಜ ರಾಜೇಶ್ವರಿ
ಆನಂದ ರೂಪಿಣಿ ಪಾಲಯಮಾಂ ।। ಅ ।।
ಕನಕ ದುರ್ಗಾ ಮಹಾ ಶಕ್ತಿ
ಮಹಾ ಮಾಯೆ ಪಾಲಯಮಾಂ
ದೀನಾ ದಾತ್ರಿ ದಯಾ ಮಹೇಶ್ವರಿ
ಪ್ರಕೃತಿ ರಕ್ಷಣಿ ಪಾಲಯಮಾಂ ।। ಅ ।।
ಶ್ರೀ ಘನ ಕೇಶ್ವರಿ ಶ್ರೀ ಚಕ್ರೇಶ್ವರಿ
ವೈಷ್ಣವ ದೇವಿ ಸಿಂಹಾಸನೇಶ್ವರಿ
ಸಚ್ಚಿದಾನಂದಿನಿ ಈಶ್ವರಿ ಜನನೀ
ಆದಿ ಶಕ್ತಿ ಪರಿ ಪಾಲಯಮಾಂ ।। ಅ ।।
ಅಂಬ ಪರಮೇಶ್ವರಿ ಅಖಿಲಾಂಡೇಶ್ವರಿ
ಆದಿ ಪರಾಶಕ್ತಿ ಪಾಲಯಮಾಂ ।। ಅ ।।
5. ದೇವಿ ಲಕ್ಷ್ಮೀ ಮಾಂಪಾಹಿ
ದೇವಿ ಲಕ್ಷ್ಮೀ ಮಾಂಪಾಹಿ
ದೀನ ದಯಾಕರಿ ಮಾಂಪಾಹಿ ।। ದೇ ।।
ಕ್ಷೀರಾಬ್ಡಿ ತನಯೇ ಮಾಂಪಾಹಿ
ಸರ್ವ ಮಂಗಳೆ ಮಾಂಪಾಹಿ ।। ದೇ ।।
ಸೋಮ ಸಹೋದರಿ ಮಾಂಪಾಹಿ
ಭಾರ್ಗವಿ ಭಾರತಿ ಮಾಂಪಾಹಿ ।। ದೇ ।।
ಅಖಿಲಾಂಡೇಶ್ವರಿ ಮಾಂಪಾಹಿ
ಲೋಕ ಜನನೀ ಮಾಂಪಾಹಿ ।। ದೇ ।।
ಕಮಲ ನಿವಾಸಿನಿ ಮಾಂಪಾಹಿ
ಕಾಮಿತ ದಾಯಕಿ ಮಾಂಪಾಹಿ ।। ದೇ ।।
ಪಾಪ ವಿನಾಶಿನಿ ಮಾಂಪಾಹಿ
ಶೋಕ ನಿವಾರಿಣಿ ಮಾಂಪಾಹಿ ।। ದೇ ।।
6 ಶ್ರೀ ಚಕ್ರ ಪುರ`-` ವಾಸಿನೀ ಶ್ರೀ ಲಲಿತಾ ಶಿವ ರೂಪಿಣೀ
ಶ್ರೀ ಚಕ್ರ ಪುರ ವಾಸಿನೀ ಶ್ರೀ ಲಲಿತಾ ಶಿವ ರೂಪಿಣೀ
ಶ್ರೀ ಮಾತಾ ಚಿದ್ರೂಪಿಣೀ ಶ್ರೀ ವಿದ್ಯಾ ಪ್ರದಾಯಿನೀ ।। ಶ್ರೀ ।।
ನಾರಾಯಣೀ ನಾದ ರೂಪಿಣೀ ನಾನಾ ಭರಣ ವಿಭೂಷಿಣೀ
ರಂಜನೀ ರಮಣಿ ಕಲ್ಯಾಣೀ ಮಹಾ ಕ್ಷೇತ್ರ ಪುರ ಪಾಲಿನೀ ।। ಶ್ರೀ ।।
ಶ್ರೀ ಶಾಂಕರೀ ಶಾಂತಿ ದಾಯಿನೀ ಚಂದ್ರ ಕರ್ಣಾ ಪ್ರವರ್ಧಿನೀ
ಶ್ರೀಕರಿ ದೇವಿ ಶಾರ್ವರೀ ಶಿವ ಜ್ಞಾನ ಪ್ರಸಾದಿನೀ
ಕೈವಲ್ಯ ಪದದಾಯಿನೀ ಶ್ರೀ ಕರಿ ದೇವಿ ಶಾರ್ವರೀ ।। ಶ್ರೀ ।।
“” ಓಂ ”’ ಓಂ ಕಾರ ಮಂತ್ರ ಬೀಜಾಕ್ಷರೀ
‘’ ಐಮ್ “ ಐ೦ ಕಾರ ಶ್ರೀ ವಾಗ ಧೀಶ್ವರೀ
“ ಹ್ರೀಂ “ ಹ್ರೀಂ ಕಾರ ಶಕ್ತಿ ಸಂಪತ್ಕರೀ
“ ಕ್ಲೀಮ್ “ ಕ್ಲಿಂ ಕಾರ ಯಂತ್ರ ನಿಖಿಲೇಶ್ವರೀ
“ ಶ್ರಿಮ್ “ ಶ್ರಿ೦ ಕಾರ ರಾಜ ರಾಜೇಶ್ವರೀ
ಪಾಹಿ ಮಾಂ ಪಾಹಿ ಮಾಂ
ಪಾಹಿ ಮಾಂ ಪಾಹಿ ಮಾಂ
ಶ್ರೀ ಲಲಿತಾ ಮಾಹೇಶ್ವರೀ ।। ಶ್ರೀ ।।
7 ಶ್ರೀ ದೇವಿ ಸೇವೆಗೆ ಬಾರಮ್ಮಾ ನಮ್ಮ ವರಲಕ್ಷ್ಮಿ
ಶ್ರೀ ದೇವಿ ಸೇವೆಗೆ ಬಾರಮ್ಮಾ ನಮ್ಮ ವರಲಕ್ಷ್ಮಿ ಪೂಜಾಗೆ ಬಾರಮ್ಮಾ ।। ಶ್ರೀ ।।
ವರ ಲಕ್ಷ್ಮಿ ವ್ರತವೂ ವಂಶ ರಕ್ಷಕವೂ ವನಿತಾ ಮಣಿಯರ ವಿಶೇಷ ವ್ರತವೂ
ಸೌ ಭಾಗ್ಯ ದಾಯಕ ಸರ್ವ ಶ್ರೇಷ್ಟವು ಆನಂದ ನೀಡುವ ಮಂಗಳ ವ್ರತವೂ ।। ಶ್ರೀ ।।
ಮನೆ ಅಂಗಳವ ಶುಭ್ರವ ಗೊಳಿಸಿ ಮುಂಬಾ ಗಿಲಿಗೆ ರಂಗೋಲಿ ಹಾಕಿ
ಹಸಿರು ತೋರಣ ದ್ವಾರಕೆ ಕಟ್ಟಿ ಆದಿ ಲಕ್ಷ್ಮಿಯ ಆಹ್ವಾನಿಸಮ್ಮಾ ।। ಶ್ರೀ ।।
ಅರಿಶಿನ ಕುಂಕುಮ ಹೂಗಳು ತಂದೂ ಧಾನ್ಯ ಲಕ್ಷ್ಮಿಯ ಅರ್ಚೆನೆ ಮಾಡಿ
ಸಂಸಾರ ಘೋರ ಶೋಕ ನಿವಾರಿಣಿ ಧೈರ್ಯ ಲಕ್ಷ್ಮಿಗೆ ಆಚಮನ ನೀಡಿ ।। ಶ್ರೀ ।।
ತ್ರಿನಾಥ, ತ್ರಿಲೋಕ ಸುರಮುನಿ ಪೂಜಿತ ಶ್ರೀ ಗಜ ಲಕ್ಷ್ಮಿಗೆ ಅರ್ಚೆನೆ ನೀಡಿ
ಸುಖ ಶಾಂತಿ ಗಳ ಸಂತತಿ ಕೊಡುವ ಸಂತಾನ ಲಕ್ಷ್ಮಿ ಗೆ ಆರತಿ ಮಾಡಿ ।। ಶ್ರೀ ।।
ಜೀವನದಲ್ಲಿ ವಿಜಯವ ನೀಡುವ ವಿಜಯಲಕ್ಷ್ಮಿ ಗೆ ಧೂಪವ ನೀಡಿ
ಅಜ್ಞಾನ ದಿರುಳನು ನೀಗುವ ತಾಯಿ ವಿದ್ಯಾಲಕ್ಷ್ಮಿ ಗೆ ದೀಪವ ನೀಡಿ ।। ಶ್ರೀ ।।
ದರಿದ್ರ ನಾಶಿನಿ , ಧನ ಪ್ರದಾಯಿನಿ ಶೋಕ ನಿವಾರಿಣಿ ಆಯುಷ್ ಕಾರಿಣಿ
ರಿಪು ಸಂಹಾರಿಣಿ ಆನಂದ ದಾಯಿನಿ ಮಹಾ ಲಕ್ಷ್ಮಿ ಗೆ ಮಂಗಳ ಹಾಡಿ ।। ಶ್ರೀ ।।
8 ಕಾಪಾಡು ಮಹಾ ಲಕ್ಷ್ಮಿ ಕೃಪೆ ತೋರಿಸು
ಕಾಪಾಡು ಮಹಾಲಕ್ಷ್ಮಿ ಕೃಪೆ ತೋರಿಸು
ಮಡಿಲಲ್ಲಿ ಮಗುವಂತೆ ದಯಾ ತೋರಿಸೋ
ನಿನ ಪ್ರೀತಿಯಾ ಮಳೆ ಕರಿಯಿಸೂ ।। ಕಾ ।।
ಶ್ರೀ ಚಕ್ರ ನಿಲಯೇ ;ದಿವಿ ಜಾವಳಿ ವಂದಿತೆ
ಸಕಲ ಲೋಕಗಳಲ್ಲೂ ಪೂಜಿಪೆ ಮಾಣಿಪೆ
ಆದಿ ಪರಾಶಕ್ತಿ ದಾನವ ಭಯಕರಿ
ಆದಿ ಅಂತ್ಯಾತೀತ ಆನಂದ ಲಹರೀ ।। ಕಾ ।।
ಕೇಯೂರ ಮಣಿ ಮಾಲ ನವರತ್ನ ಹಾರಗಳ
ಸರ್ವಾ ಭರಣದಲಿ ಆಲಂಕೃತೇ
ಆ ದಿವ್ಯ ವೈಭವ ವ ಬಣ್ಣಿಸಿ ಬಾಯಿಲ್ಲ
ಕಮಲಾಕ್ಷ ವಲ್ಲಭೆ ಕಾಪಾಡು ಬಾರಮ್ಮಾ ।। ಕಾ ।।
ಕಾಪಾಡು ಮಹಾಲಕ್ಷ್ಮಿ ಕೃಪೆ ತೋರಿಸು
ಮಡಿಲಲ್ಲಿ ಮಗುವಂತೆ ದಯಾ ತೋರಿಸೋ
ನಿನ ಪ್ರೀತಿಯಾ ಮಳೆ ಕರಿಯಿಸೂ ।। ಕಾ ।।
No comments:
Post a Comment