ಭಾರವೇ ಭಾರತಿ ರಮಣಾ ನಿನಗೆ ನಾ
ಭಾರವೇ ಭಾರತಿರಮಣಾ ನಿನಗೆ ನಾ ।। ಭಾ ।।
ಲಂಕಾ ನಾಥನ ಬಿಂಕವ ಮುರಿದೂ
ಅಕಲಂಕ ಚರಿತನ ಕಿಂಕರ ನೆನಿಸಿದಿ
ಪಂಕ ಜಾಕ್ಷಿಗೆ ಅಂಕಿತ ಉಂಗುರ ವಿತ್ತೂ
ಶೆಂಕೆ ಇಲ್ಲದೆ ನೀ ಲಂಕೆಯ ದಹಿಸಿದೆ ।। ಭಾ ।।
ಸೋಮ ಕುಲದ ಜನಿಸಿ ನಿಸ್ಸಿಮ ಮಾಹಿಮ ನೆನಿಸಿ
ತಾಮಸ ವಚನವ ಧೂಮ ಮಾಡಿದೆ
ಕಾಮಿನಿ ಮೋಹಿಸಿ ಪ್ರೇಮದಿ ಸಲಹಿದೆ
ತಾಮರ ದಾಕ್ಷಣ ಸೇವೆಯ ಮಾಡಿದೆ ।। ಭಾ ।।
ವೇದವ್ಯಾಸರ ಸೇವೆಯ ಮಾಡಿ
ಮೋಹ ದಿಂದ ಬಹು ವಾದಗಳಾಡಿ
ಆಗಮ ಶಾಸ್ತ್ರಗಳ ಹೋಮವ ಮಾಡೀ
ವಿಜಯ ವಿಠ್ಠಲನ ಸೇವಕ ನೆನಿಸಿ ।। ಭಾ ।।
ಭಾರವೇ ಭಾರತಿರಮಣಾ ನಿನಗೆ ನಾ ।। ಭಾ ।।
No comments:
Post a Comment