ಆರತಿ ಶುಭ ದಾರತಿ ಶ್ರೀ ಲಕ್ಷ್ಮಿಗೆ ಶುಭ ದಾರತಿ ।। ಆರ ।।
ಕ್ಷೀರ ಸಾಗರ ದಲ್ಲಿ ಮಲಗಿದ ಹರಿಯ ಹೃದಯದ ರಾಣಿಗೆ
ಕಮಲ ನಯನೇ ಕಮಲ ಮುಖಿಯೇ ಕಮಲ ನಾಭನ - ಅರಸಿಗೆ ।। ಆರ ।।
ಆರತಿ ಶುಭ ದಾರತಿ ಶ್ರೀ ಅಂಬಿಕೆ ಗೆ ಶುಭ ದಾರತಿ
ನಾಗ ಭೂಷಣ ಚಂದ್ರ ಚೂಡನ ಹರನ ಹೃದಯದ ರಾಣಿಗೆ
ಭಸ್ಮ ದಾರಿಯ ಮೂರು ಕಣ್ಣನು ಪಡೆದ ಶಿವನ ಅರಸಿಗೆ ।। ಆರ ।।
ಹರಿಯ ಸುತನ ಶೃಷ್ಠಿ ಕರ್ತನ ಬ್ರಹ್ಮನ ಮಹರಾಣಿಗೆ
ವಿದ್ಯ ದೇವತೆ ಸರಸ್ವತಿಗೆ ವೀಣಾ ಪಾಣಿಗೆ ವಾಣಿಗೆ ।। ಆರ ।।
ಆರತಿ ಶುಭ ದಾರತಿ ಶ್ರೀ ಲಕ್ಷ್ಮಿ ಗೆ ಶುಭ ದಾರತಿ
ಆರತಿ ಶುಭ ದಾರತಿ ಶ್ರೀ ಅಂಬಿಕೆ ಗೆ ಶುಭ ದಾರತಿ
ಆರತಿ ಶುಭ ದಾರತಿ ಶ್ರೀ ಶಾರದ ಗೆ ಶುಭ ದಾರತಿ ।। ಆರ ।।
No comments:
Post a Comment