ಮುರಹರ ನಗಧರ ನೀನೇ ಗತೀ
ಮುರ ಹರ ನಗಧರ ನೀನೆ ಗತೀ ಧರಣಿ ಲಕ್ಷ್ಮಿ ಕಾಂತಾ ನೀನೇ ಗತೀ ।। ಮು ।।
ಶಕಟ ಮರ್ಧನ ಶರಣಾ ಗತ ವತ್ಸಲ ಮಕರ ಕುಂಡಲಧರ ನೀನೇ ಗತೀ
ಅಕಳಂಕ ಚರಿತಾ ಆದಿ ನಾರಾಯಣ ರುಕುಮಿನಿ ಪತಿ ಕೃಷ್ಣ ನೀನೇ ಗತೀ ।। ಮು ।।
ಮನೆ ಮನೆ ಗಳ ಹೊಕ್ಕು ಕೆನೆ ಹಾಲು ಬೆಣ್ಣೆಯ ಪ್ರಮಿತ ಮೆದ್ದ ಹರಿ ನೀನೇ ಗತೀ
ಅನುದಿನ ಭಕುತರ ಬಿಡದೇ ಕಾಯುವ ಘನ ಮಹಿ ಮಾಂಕಾ ಕೃಷ್ಣಾ ನೀನೇ ಗತೀ ।। ಮು ।।
ಪನ್ನಗ ಶಯನಾ ಸುವರ್ಣ ಗಮನಾ ಪೂರ್ಣ ಚರಿತ ಹರಿ ನೀನೇ ಗತೀ
ಹೊನ್ನ ಹೊಳೆಯಲಿ ಪುರಂಧರ ವಿಠಲಾ ಆ ಆ ಆ ಆ ಆ ಆ
ವಿಠಲಾ ವಿಠಲಾ ವಿಠಲಾ
ಹೊನ್ನ ಹೊಳೆಯಲಿ ಪುರಂಧರ ವಿಠಲಾ ಚೆನ್ನ ಲಕ್ಷ್ಮೀ ಕಾಂತ ನೀನೇ ಗತೀ ।। ಮು ।।
ಮುರ ಹರ ನಗಧರ ನೀನೆ ಗತೀ ಧರಣಿ ಲಕ್ಷ್ಮಿ ಕಾಂತಾ ನೀನೇ ಗತೀ ।। ಮು ।।
No comments:
Post a Comment