Search SakriBuddi Blog

Thursday, July 2, 2020

ಶ್ರೀ ದೇವಿ ಸೇವೆಗೆ ಬಾರಮ್ಮಾ ನಮ್ಮ ವರಲಕ್ಷ್ಮಿ

  • ಶ್ರೀ  ದೇವಿ ಸೇವೆಗೆ ಬಾರಮ್ಮಾ  ನಮ್ಮ ವರಲಕ್ಷ್ಮಿ 



ಶ್ರೀ ದೇವಿ ಸೇವೆಗೆ  ಬಾರಮ್ಮಾ             ನಮ್ಮ ವರಲಕ್ಷ್ಮಿ  ಪೂಜಾಗೆ ಬಾರಮ್ಮಾ                ।। ಶ್ರೀ ।।

ವರ ಲಕ್ಷ್ಮಿ ವ್ರತವೂ  ವಂಶ ರಕ್ಷಕವೂ       ವನಿತಾ  ಮಣಿಯರ  ವಿಶೇಷ  ವ್ರತವೂ 
ಸೌ ಭಾಗ್ಯ  ದಾಯಕ  ಸರ್ವ ಶ್ರೇಷ್ಟವು     ಆನಂದ ನೀಡುವ  ಮಂಗಳ ವ್ರತವೂ                  ।। ಶ್ರೀ ।।

ಮನೆ  ಅಂಗಳವ  ಶುಭ್ರವ  ಗೊಳಿಸಿ        ಮುಂಬಾ ಗಿಲಿಗೆ  ರಂಗೋಲಿ  ಹಾಕಿ  
ಹಸಿರು  ತೋರಣ  ದ್ವಾರಕೆ  ಕಟ್ಟಿ           ಆದಿ  ಲಕ್ಷ್ಮಿಯ  ಆಹ್ವಾನಿಸಮ್ಮಾ                       ।। ಶ್ರೀ ।।

ಅರಿಶಿನ ಕುಂಕುಮ ಹೂಗಳು ತಂದೂ       ಧಾನ್ಯ  ಲಕ್ಷ್ಮಿಯ   ಅರ್ಚೆನೆ  ಮಾಡಿ 
ಸಂಸಾರ  ಘೋರ  ಶೋಕ  ನಿವಾರಿಣಿ      ಧೈರ್ಯ  ಲಕ್ಷ್ಮಿಗೆ  ಆಚಮನ ನೀಡಿ                    ।। ಶ್ರೀ ।।

ತ್ರಿನಾಥ, ತ್ರಿಲೋಕ ಸುರಮುನಿ ಪೂಜಿತ   ಶ್ರೀ ಗಜ  ಲಕ್ಷ್ಮಿಗೆ  ಅರ್ಚೆನೆ  ನೀಡಿ
ಸುಖ  ಶಾಂತಿ ಗಳ  ಸಂತತಿ  ಕೊಡುವ    ಸಂತಾನ ಲಕ್ಷ್ಮಿ ಗೆ  ಆರತಿ  ಮಾಡಿ                    ।। ಶ್ರೀ ।।

ಜೀವನದಲ್ಲಿ  ವಿಜಯವ  ನೀಡುವ   ವಿಜಯಲಕ್ಷ್ಮಿ ಗೆ  ಧೂಪವ ನೀಡಿ  
ಅಜ್ಞಾನ  ದಿರುಳನು  ನೀಗುವ ತಾಯಿ      ವಿದ್ಯಾಲಕ್ಷ್ಮಿ ಗೆ   ದೀಪವ  ನೀಡಿ                        ।। ಶ್ರೀ ।।

ದರಿದ್ರ ನಾಶಿನಿ , ಧನ ಪ್ರದಾಯಿನಿ          ಶೋಕ ನಿವಾರಿಣಿ  ಆಯುಷ್ ಕಾರಿಣಿ 

ರಿಪು  ಸಂಹಾರಿಣಿ  ಆನಂದ  ದಾಯಿನಿ     ಮಹಾ ಲಕ್ಷ್ಮಿ ಗೆ  ಮಂಗಳ  ಹಾಡಿ                      ।। ಶ್ರೀ ।।

No comments:

Post a Comment