ಕರುಣಾಕರ ನಲ್ಲವೇ ವಿಠಲಾ
ಕರುಣಾಕರ ನಲ್ಲವೇ ವಿಠಲಾ ...... ಕರುಣಾಕರ ನಲ್ಲವೇ
ಶರಣ ವತ್ಸಲ ನಲ್ಲವೇ ವಿಠಲಾ.......
ಕರುಣಾಕರ ನಲ್ಲವೇ ವಿಠಲಾ....... ।। ಕ ।।
ತರಳಲನೆ ಗಾಗಿ ಕಂಬದಿ ಬಂದೂ ಪೋರದಿಹೇ
ತರಳೆ ರಕ್ಷಣ ವಚನವೇ ಇತ್ತಾ ಶ್ರೀ ಕೃಷ್ಣಾ ।। ಕ ।।
ಕರಿಯ ಕಾಲ್ಪಿಡಿದ ಮಕರಿಯಾ ತಡಿಯಲು
ಗರುಡನ ಹೆಗಲೇರಿ ಕರಿಯ ಪೊರೆದ ಹರಿ ।। ಕ ।।
ಮರಣ ಕಾಲದಲಿ ತರುಣನು ಕೂಗಲು
ಕರೆದ ನೆಂದು ಅಜ ಮಿಳನ ಪೊರೆದ ಹರಿ ।। ಕ ।।
ವಿಠಲಾ ...... ವಿಠಲಾ ...... ವಿಠಲಾ ......
ವಿಠಲಾ ...... ವಿಠಲಾ ...... ಕರುಣಾಕರ ನಲ್ಲವೇ
ದಾಸ ಜನರ ಮನ ದಾಶಯ ಸಲಿಸುವ
ದಾಸಾಂತರ್ಗತ ದಾಸ ಕೇಶವ ನುತ ।। ಕ ।।
ಕರುಣಾಕರ ನಲ್ಲವೇ ವಿಠಲಾ....... ವಿಠಲಾ.......
ಕರುಣಾಕರ ನಲ್ಲವೇ ಕರುಣಾಕರ ನಲ್ಲವೇ
No comments:
Post a Comment