ಹೇಗೆ ನಾ ಶೃಂಗರಿಸಿ
ಹೇಗೆ ನಾ ಶೃಂಗರಿಸಿ ಪೂಜಿಸಲು ನಿನ್ನಾ
ಹೇ ದೇವ ಶಿವನೇ ನೀ ರಕ್ಷಿ ಪೆನ್ನಾ ।। ಹೇ ।।
ತಲೆ ಬಾಚಿ ಮುಡಿ ಕಟ್ಟಿ ಶೃಂಗರಿಪ ನೆಂದರೇ
ತಲೆ ಯಲ್ಲಿ ಜಲದೇವಿ ಗಂಗೆ ಇಹಲೋ
ಮೂಡಿಯ ಮೇ ಲೊಂದು ನಾ ಹೂ ವಿಡುವೆ ನೆಂದರೇ
ಮುಡಿಯಲ್ಲಿ ಬಾಲೆಂದು ನಗುವ ನಲ್ಲೂ ।। ಹೇ ।।
ಮುದ್ದು ಹಣೆ ಮಧ್ಯದಲಿ ಬೊಟ್ಟಿಡುವ ನೆಂದರೇ
ಮೂರನೇಯ ಹಣೆ ಗಣ್ಣು ಮುಟ್ಟ ಬಿಡದೂ
ಹಾರ ಮಾಲೆ ಗಳನ್ನೂ ಕಂಠಕ್ಕೆ ತೊಡಿಸಲೇ
ಹೆಡೆ ಹಾವು ಬಿಡದಲ್ಲೋ ನೀಲಕಂಠಾ ।। ಹೇ ।।
ಹೇಗಾದರೊ ಶಿವನೇ ಭವದ ಭಯ ತಾರಣನೇ
ಹಿಮದ ನಿನ್ನ ಅರಮನಿಗೆ ಕರೆಸಿ ಕೊಳ್ಳೆನ್ನಾ
ವಿಷ್ಣು ಮೂರ್ತಿಯ ಸಖನೆ ವಿಶ್ವನಾಥನೆ ನಿನ್ನ
ವಿಶ್ವ ಸಂಸಾರಕ್ಕ್ ಕರೆಸಿ ಕೊಳ್ಳೆನ್ನಾ ।। ಹೇ ।।
No comments:
Post a Comment