Search SakriBuddi Blog

Sunday, July 19, 2020

ಬಾಲ ಗೋಪಾಲನೀ ಹತ್ತಿರಕೆ ಬಾರೋ

  ಬಾಲ ಗೋಪಾಲನೀ ಹತ್ತಿರಕೆ ಬಾರೋ 


ಬಾಲ  ಗೋಪಾಲ  ನೀ   ಹತ್ತಿರಕೆ  ಬಾರೋ 
ತಿನಿಸುಗಳನು   ನೀಡುವೆನು   ಶ್ರೀ ಕೃಷ್ಣ   ಬಾರೋ 
ಬಾರೋ   ಬಾರೋ     ಸ್ವಾಮಿ  ಬಾರೋ                        ।। ಬಾ ।। 

ಹಾಡುವಾ  ಗಿಣಿಗಳ  ಇಂಚರದ  ನೋಡಿ 
ನುಡಿಸು  ನೀ  ಯದುಕುಲಾ   ಕಾಂಭೋಜಿ  ರವಳಿ 
ಇರಿಸುತಾ   ಹೆಜ್ಜೆಯನು   ಮೂಡಿಸುತಾ   ತಾಳ 
ಪುರುಷ  ಪುರುಷೋತ್ತಮನೆ   ಓಡಿಬಾ   ಕೃಷ್ಣಾ                  ।। ಬಾ ।। 

ತಿರುಗಿ  ತಿರುಗಿ  ಬಾರೋ  ಪ್ರಶಾಂತವಾ ಸಂತಾ 
ಮೂಡಿಸುವ  ಶ್ರೀ  ಹರಿ  ಚಂದನದ  ಗಂಧಾ 
ತಿಂಗಳ  ಚಂದ್ರನೇ  ಅಘಹರಿ  ಚೆನ್ನಾ  
ಪುರುಷ  ಪುರುಷೋತ್ತಮನೆ   ಓಡಿಬಾ   ಕೃಷ್ಣಾ                  ।। ಬಾ ।। 


No comments:

Post a Comment