ಶ್ರೀ ದೇವಿ ಸೇವೆಗೆ ಬಾರಮ್ಮಾ
ಶ್ರೀ ದೇವಿ ಸೇವೆಗೇ ಬಾರಮ್ಮಾ . ನಮ್ಮ ವರಲಕ್ಷ್ಮಿ ಪೂಜಾಗೆ ಬಾರಮ್ಮಾ ।। ಶ್ರೀ ।।
ವರಲಲಕ್ಷ್ಮಿ ವ್ರತವೂ, ವಂಶ ರಕ್ಷಕವೂ ವನಿತಾ ಮಣಿಯರ ವಿಶೇಷ ವ್ರತವೋ
ಸೌಭಾಗ್ಯ ದಾಯಕ , ಸರ್ವ ಶ್ರೇಷ್ಟವೂ ಆನಂದ ನೀಡುವ ಮಂಗಳ ವ್ರತವೋ ।। ಶ್ರೀ ।।
ಮನೆ ಅಂಗಳವ ಶುಭ್ರವ ಗೊಳಿಸಿ ಮುಂಬಾಗಿಲಿಗೆ ರಂಗೋಲಿ ಹಾಕೀ
ಹಸಿರು ತೋರಣಾ . ದ್ವಾರಕೆ ಕಟ್ಟಿ ಆದಿ ಲಕ್ಷ್ಮಿಯ ಆಹ್ವಾನಿಸಮ್ಮಾ ।। ಶ್ರೀ ।।
ಅರಿಶಿಣ ಕುಂಕುಮ, ಹೂಗಳು ತಂದೂ ಧಾನ್ಯ ಲಕ್ಷ್ಮಿಯಾ ಅರ್ಚೆನ ಮಾಡಿ
ಸಂಸಾರ ಘೋರ ಶೋಕ ನಿವಾರಿಣಿ ಧೈರ್ಯ ಲಕ್ಷ್ಮಿಗೆ ಆಚಮನ ನೀಡಿ ।। ಶ್ರೀ ।।
ತ್ರಿನಾಥ ತ್ರಿ ಲೋಕ ಸುರಮುನಿ ಪೂಜಿತ ಶ್ರೀ ಗಜ ಲಕ್ಷ್ಮಿಗೆ ಅರ್ಚೆನ ನೀಡಿ
ಸುಖ ಶಾಂತಿ ಗಳ , ಸಂತತಿ ಕೊಡುವ ಸಂತಾನ ಲಕ್ಷ್ಮಿಗೆ ಆರತಿ ಮಾಡಿ ।। ಶ್ರೀ ।।
ಜೀವನ ದಲ್ಲಿ ವಿಜಯ ನೀಡುವ ವಿಜಯ ಲಕ್ಷ್ಮಿ ಗೆ ಧೂಪವ ನೀಡಿ
ಅಜ್ಞಾನ ದಿರುಳನು ನೀಗುವ ತಾಯೀ ವಿದ್ಯಾ ಲಕ್ಷ್ಮಿ ಗೆ ದೀಪವ ನೀಡಿ ।। ಶ್ರೀ ।।
ದರಿದ್ರ ನಾಶಿನಿ, ಧನ ಪ್ರದಾಯಿನಿ ಶೋಕ ನಿವಾರಿಣಿ ಆಯುಷ್ ಕಾರಿಣಿ
ರಿಪು ಸಂಹಾರಿಣೀ ಆನಂದ ದಾಯಿನಿ ಮಾಹಾ ಲಕ್ಷ್ಮಿಗೆ ಮಂಗಳ ಹಾಡಿ ।। ಶ್ರೀ ।।
No comments:
Post a Comment